Sunday, 26 July 2020

ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಲು ಬೇಕಾಗಿರುವ ಅಂಶಗಳು

    ಕುಳಿತು ಕೆಟ್ಟ ಕೂಚು ಭಟ್ಟ ಎನ್ನುವ ಮಾತಿನಂತೆ 20ನೇ ಮಾರ್ಚ್ 2020 ರಿಂದ ಜೂನ್ 8 ನೇ ದಿನಾಂಕದವರೆಗೆ ಕುುಳಿತು  ಉಣ್ಣುವುದು ಆಗಿತ್ತು ಉದ್ಯೋಗ ಇರಲಿಲ್ಲ ಸಂಬಳ ಮಾತ್ರ ನಿರಂತರ, ಇಲ್ಲಿಯವರೆಗೂ ಕೂಡ...........
ಉದ್ಯೋಗವಿಲ್ಲದ ಆದಾಯ ಇದು ಕೂಡ  ಪಾತಕ ಗಳಲ್ಲೊಂದು ಆದರೆ ನಮ್ಮಂಥ ಬಡಪಾಯಿ ಶಿಕ್ಷಕರ ಪಾಡು ಈ ಉದ್ಯೋಗ ಬಿಟ್ಟು ಬೇರೆ ಉದ್ಯೋಗ ಮಾಡಲು ಬರುವುದಿಲ್ಲ ವಾಗಿರುವುದು.
       ಇದೆಲ್ಲಾ ಏನೇ ಇದ್ದರೂ ಸರ್ಕಾರ ನಿರಂತರವಾಗಿ ಸಂಬಳ ನೀಡುತ್ತಿದ್ದು ಈ ಸಂದರ್ಭದಲ್ಲಿ ನಾವುಗಳು ಅದರಲ್ಲಿ ಶಿಕ್ಷಕರಾದವರು ನಿರಂತರ ವಿದ್ಯಾರ್ಥಿಯಾಗಿದ್ದು ಪ್ರತಿದಿನ ಅಧ್ಯಯನಶೀಲರಾದಾಗ ಮಾತ್ರ ವೃತ್ತಿಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಮಕ್ಕಳಿಲ್ಲದ ಶಾಲೆಯಲ್ಲಿ ಶಿಕ್ಷಕರಿಗೆ ಏನು ಕೆಲಸ ಎನ್ನುವ ವಾದ ಒಂದು ಕಡೆ,ಹಾಗಾದರೆ ನಾವು ಶಾಲೆ ಪುನಃ ಪ್ರಾರಂಭವಾದಾಗ ಸಮರ್ಪಕ ಬೋಧನೆಯ ಸಲುವಾಗಿ ವೃತ್ತಿ ನೈಪುಣ್ಯತೆಯನ್ನು ಹೊಂದುವುದು ಅತಿ ಅವಶ್ಯಕ.
         ಮಕ್ಕಳ ಮನಸ್ಸನ್ನು ಅರಿತು ಅವರ ಅಭಿಲಾಷೆಗಳಿಗೆ ಅಗುಣವಾಗಿ ಕ್ಲಿಷ್ಟ ಪರಿಕಲ್ಪನೆಗಳನ್ನು ಮನಮುಟ್ಟುವಂತೆ ನಾವು ಬೋಧಿಸುವುದು ಹೇಗೆ? ಎನ್ನುವುದರ ಬಗ್ಗೆ ಹಲವಾರು ಶಿಕ್ಷಣ ತಜ್ಞರು ಮನೋವಿಜ್ಞಾನಿಗಳು ಬರೆದಿರುವ ಪುಸ್ತಕ, ಲೇಖನಗಳನ್ನು ಓದುವುದು ಅವುಗಳನ್ನು ಪ್ರಾಯೋಗಿಕವಾಗಿ ಬಳಸಲು ಈ ಅವಧಿ work from home ಒಂದು ಒಳ್ಳೆಯ ಸಂದರ್ಭವನ್ನು ಒದಗಿಸಿದೆ ಬೋಧನೋಪಕರಣಗಳನ್ನು ತಯಾರಿಸಿಕೊಳ್ಳಲು ಹೆಚ್ಚಿನ ಸಮಯ ಲಭ್ಯವಾಗಿದ
          ಈಗಿನ ಆಂಡ್ರಾಯಿಡ್ & 4ಜಿ,5ಜಿ ಯುಗದಲ್ಲಿ ನಮ್ಮ ಪೂರ್ವತಯಾರಿ ಉತ್ಕೃಷ್ಟವಾಗಿರಬೇಕು ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಲು ಅನೇಕ ಶೈಕ್ಷಣಿಕ ಅಂತರ್ಜಾಲಗಳನ್ನು ಜಾಲಾಡಿ ಅವುಗಳ ಕೊಂಡಿಯನ್ನು ಮಕ್ಕಳು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದನ್ನು ತಿಳಿಸಬೇಕು ಯೂಟ್ಯೂಬ್ನಲ್ಲಿ ಅನೇಕ ಶೈಕ್ಷಣಿಕ ವಿಡಿಯೋಗಳು ತರಗತಿಗಳಿಗನುಗುಣವಾಗಿ ವಿಷಯವಾರು ಇದ್ದು ಅವುಗಳನ್ನು ಬಳಸಿಕೊಂಡು ಸಮರ್ಪಕವಾಗಿ ಬೋಧನೆ ಮಾಡಬಹುದು ಮತ್ತು ಮಕ್ಕಳು ನೋಡುತ್ತಾ ಕಲಿಯಬಹುದು. ಅಲ್ಲದೆ ನಮ್ಮದೇ ಆದಂತಹ ವಿಡಿಯೋಗಳನ್ನು ಅಪ್ಲೋಡ್ ಮಾಡಬಹುದು. ಮಕ್ಕಳ ಆನ್ಲೈನ್ ಕಲಿಕೆಗೆ  vedantu, Meritnation, mega Shala, ASSVidyalay, robomate +, Diksha ಇನ್ನೂ ಮುಂತಾದ ಅನೇಕ ಯಾಪಗಳು ಕಲಿಕೆಯನ್ನು ಶ್ರೇಷ್ಠ ಮಟ್ಟಕ್ಕೆ ಕೊಂಡೊಯ್ಯಲು ತುಂಬಾ ಸಹಕಾರಿಯಾಗಿವೆ.
        ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿದ ನನ್ನಂತ ಅನೇಕ ಶಿಕ್ಷಕರಿಗೆ ಅವಧಿ ಅತ್ಯಮೂಲ್ಯ ವೃತ್ತಿ ಕೌಶಲ್ಯತೆಯನ್ನು ಹೆಚ್ಚಿಸಿಕೊಳ್ಳಲು ಇದು ವಸಂತ ಕಾಲ.
          ಹಿಂದೊಂದು ಕಾಲ ಪುಸ್ತಕ ಮತ್ತು ನೋಟ್ಸ್ ಗಳನ್ನು ಕೊಂಡುಕೊಂಡು ಓದಬೇಕಾಗಿತ್ತು ಆದರೆ ಈಗ digital library, e library. ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿದ್ದು, ಅನೇಕ ಪುಸ್ತಕಗಳು ನಮ್ಮ ಬೆರಳ ತುದಿಯಲ್ಲಿ ಸಿಗುವಂತಹ ಸೌಲಭ್ಯ swayam, weebley, Opera access resource.com ಇನ್ನು ಮುಂತಾದ ಜಾಲತಾಣಗಳಲ್ಲಿ ಹೇರಳವಾಗಿ ಡಿಜಿಟಲ್ ಪುಸ್ತಕಗಳು ಲಭ್ಯವಿರುತ್ತವೆ ಅಲ್ಲದೆ ವೃತ್ತಪತ್ರಿಕೆಗಳು ವಾರಪತ್ರಿಕೆಗಳು ಜರ್ನಲ್ಸ್ ಇವುಗಳನ್ನು ಕೂಡ ನಾವು ಉಚಿತವಾಗಿ ಪಡೆಯಬಹುದು.
         ಕೇವಲ ಪುಸ್ತಕದ ಸಾರವನ್ನ ಭಟ್ಟಿ ಇಳಿಸುವ ಕ್ರಿಯೆ ಶಿಕ್ಷಕನಿಂದ ಆಗಬಾರದು ಲಿಯೋ ಟಾಲ್ಸ್ಟಾಯ್ ಹೇಳುವಂತೆ" ಬದುಕನ್ನು ಎದುರಿಸಲು ಸನ್ನದ್ಧ ರನ್ನಾಗಿ ಸದ ಶಿಕ್ಷಣ ಒಂದು ಶಿಕ್ಷಣವೇ ಅಲ್ಲ".
               ಕೊನೆಯದಾಗಿ ಒಂದು ಮಾತು ಎಂಥ ಪ್ರಕಾಂಡ ಪಂಡಿತ ಶಿಕ್ಷಣತಜ್ಞ ಆಗಿದ್ದರೂ ಕೂಡ ಮಗುವಿನ ಮಟ್ಟಕ್ಕೆ ಇಳಿದು ಮಗುವಿಗೆ ಮನನ ವಾಗುವಂತೆ ಬೋಧನೆ ಮಾಡಬೇಕು ನೋಡುತ್ತಾ ಕಲಿ ಮಾಡುತ್ತಾ ಕಲಿ ಆಡುತ್ತಾ ಕಲಿ ಎನ್ನುವ ಮಾತಿನಂತೆ ಈ ಮೂರು ಪ್ರಕ್ರಿಯೆಗೆ ನಾವು ಸಾಕಷ್ಟು ಸಿದ್ಧತೆಯನ್ನು ಮಾಡಿಕೊಳ್ಳಲು ಈ ಸಮಯ ಆನಂದಮಯ ಸುಸಮಯ.

3 comments:

9 th Standard

unit plans https://drive.google.com/file/d/1QUmhpC2Fq2eS8as0XaTXbeK4vh33_Jj4/view?usp=sharing